ಅ೦ಥ ಸಹನೆಗೆ ಸವಾಲೆಸೆದು, ಸತ್ಯಾಗ್ರಹ ಮಾಡಿ ಗೆದ್ದವರು ಗಾ೦ಧಿ... ಸುಮ್ಮನೆ ಛಾಯಾಚಿತ್ರಕ್ಕೆ ಮುಖ ತೋರಿಸಿ ಮರೆಯಾಗುವ ನಾಯಕರ ನಡುವೆ ಬೆಳೆದ ನಮಗೆ ಇದೆಲ್ಲ ಎಲ್ಲಿ ಅರ್ಥವಾಗಬೇಕು? ನಮ್ಮ ತಪ್ಪಲ್ಲ... ಇ೦ಥವರನ್ನು ನಮ್ಮೆದುರು ಬೆಳೆಯಲು ಬಿಟ್ಟಿದ್ದಾರಲ್ಲ, ನಮ್ಮ ಹಿರಿಯರು..ಅವರ ತಪ್ಪು... ತಪ್ಪು ಎ೦ದು ತಿಳಿದೂ ಸುಮ್ಮನೆ ಕುಳಿತರೆ ಆಗ ಅದು ನಮ್ಮ ತಪ್ಪೆನಿಸುತ್ತದೆ...!! ಆದ್ದರಿ೦ದ ಈಗಲೇ ಎಚ್ಚೆತ್ತುಕೊ೦ಡು ನಮ್ಮೆದುರು ಬೇರು ಬಿಟ್ಟು ಭೂತಾಕಾರವಾಗಿ ಬೆಳೆದಿರುವ ನಗು(ವ್ಯಾಘ್ರ)ಮುಖದ ನಾಯಕರನ್ನು ಕಿತ್ತೆಸೆಯಬೇಕು... "ನಮ್ಮಿ೦ದಾದೀತೆ?" - ಎನ್ನುವುದು ಸಹಜ ಪ್ರಶ್ನೆ...
ಹೀಗೆಲ್ಲ ಸಿಕ್ಕಾಪಟ್ಟೆ ಪ್ರಶ್ನೆ ಕೇಳುವ ಪ್ರಶ್ನೆಕೋರರಿಗೆ ನನ್ನದೊ೦ದು ಪ್ರಾಮಾಣಿಕ ಅಹವಾಲು... - "ಯಾವುದೇ ಕೆಲಸವನ್ನು ಆರ೦ಭಿಸಿದರೆ ಮಾತ್ರವಲ್ಲವೆ ಸಾಧ್ಯಸಾಧ್ಯತೆಗಳು ನಮ್ಮೆದುರು ನಿಲ್ಲುವುದು??"... ಕೆಲಸವನ್ನಾರ೦ಭಿಸುವ ಮೊದಲೇ ಪ್ರಶ್ನೆ ಕೇಳುವ ಸ್ನೇಹಿತರೇ, ಒಮ್ಮೆ ನಿಮ್ಮ ಕನ್ನಡಿಯೆದುರು ನಿಲ್ಲಿ... ನಿಮ್ಮ ಪ್ರಶ್ನೆಗಳಿಗೆ ಅತ್ಯುತ್ತಮ ಉತ್ತರ ಅಲ್ಲಿದೆ...!!!
ಸ೦ತಾಪದಿ೦ದ,
ಕವಿಕಿರಣ.
1 comment:
From Arun:-
ಸಂತಾಪ ಬೇಡ ಕಿರಣ್,
ಕವಿ ಮನಸ್ಸಿಗೆ ತಾನೆ ಇಂತೆಲ್ಲ ಪ್ರಶ್ನೆಗಳು ಮೂಡುವುದು ಅಷ್ಟೆ ಸಹಜವೆಂದರೆ ನಿಮ್ಮ ಪ್ರಶ್ನೆಗಳು ಎಲ್ಲರ ಮನದಲ್ಲೂ ಬಹಳ ದಿನಗಳಿಂದ ಆಳವಾಗಿ ಕೊರೆಯುತ್ತಲೇ ಇವೆ. ಕಾರಣ ಪ್ರಶ್ನೆ ಹುಟ್ಟಿಸುವಲ್ಲಿನ ಜಾಣ್ಮೆ, ಮತ್ತು ಅದರ ಬಗೆಗೆ ತಲೆ ಕೊಡದ ಹುಚ್ಚು ಮನಸ್ಸು.
ಒಂದು ಕಡೆ ಹೀಗೆ ಒಬ್ಬ ಕವಿ ಹೇಳುತ್ತಾನೆ;
ನಾಡ ದೇವಿಯೇ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯ...
ನೋವು ನಗೆಯ ಸಂಮಿಶ್ರದಲ್ಲಿ ಎದೆಯಾಯಿತದಕೆ ವಷ್ಯ
ಒಂದೆದೆಯ ಹಾಲ ಕುಡಿದು ಬೆಳೆದವರಲ್ಲಿ ಎಷ್ಟೊಂದು ಭೇದ ತಾಯಿ
ಒಂದೇ ನೆಲದ ರಸ ಹೀರಲೆಮಗೆ ಸಿಹಿ ಕಹಿಯ ರುಚಿಯೇ ತಾಯಿ...
ಈಗಾಗಿರುವುದು ಅಷ್ಟೇ; ಇಷ್ಟೂ ಕಾಲ ಬೆಳೆದ ಬಂದ ದಾರಿಯಲ್ಲಿ ಎಲ್ಲೂ ಬದಲಾವಣೆಗಳನ್ನು ಬಯಸುವ ಮನಗಳು ಕೆಲಸ ಮಾಡಿರದೆ ಮತ್ತು ಕೆಲಸ ಮಾಡಲು ಅವಕಾಶಗಳು ಸಿಗದೇ ತೊಲಲಾಡಿರುತ್ತವೆ.
ಅಷ್ಟೇ ಅಲ್ಲದೆ ಬೆಳೆಯೋ ಬೆಳೆಸೋ ಶಕ್ತಿಗಳಿಗೆ ಭವ್ಯ ಭಾರತವು ಸಿಕ್ಕಿರದೇ, ಬರಿಯ ಸ್ವಾರ್ಥ ಸಾಧನೆಗೆ ವೇದಿಕೆ ಬಳಸಿಯಾಗಿದೆ. ಬಹಳ ಖೇದಕರ ಬೆಳವಣಿಗೆ. ಇವತ್ತಿಗೆ ಮರಳಿ ಗಾಂಧಿಯನ್ಥವರು ಬಂದರೂ ಬದುಕಲು ಬೆಳೆಯಲು ಆಗದ ಪರಿಸ್ಥಿತಿ ಇದೆ.
ಸುಲಭ ಉಪಾಯ ಇಷ್ಟೇ: ಆಳುವ ಕೈಗಳಲ್ಲಿ ಬಲ, ತಲೆಯಲ್ಲಿ ಪ್ರಶ್ನಿಸುವ, ಬೆಳೆಯಲೇ ಬೇಕೆಂಬ ಛಲ ಇರಬೇಕು. ಅಂಥವರನ್ನು ಹುಡುಕಿ ಆರಿಸುವ ಮನೋಭಾವ ನಮಗಿರಬೇಕು.
ಏನಂತೀರಿ?
ಇಂತಿ,
ಅರುಣ್
Post a Comment