Wednesday, December 31, 2008

ಹೊಸ ವರ್ಷವೇ...


ಕಳೆದು ಹೋಗುವ ಮುನ್ನ ಮನಸ್ಸಿಗೆ ಕನ್ನ ಹಾಕುವ ನನ್ನ ನೆನಪುಗಳ ಕಳ್ಳನನ್ನು ಒ೦ದು ಕ್ಷಣ ಬಿಗಿಯಾಗಿ ಹಿಡಿದಿಟ್ಟುಕೊ೦ಡು ನನ್ನೆಲ್ಲ ಭಾವಗಳ ಸೇಡು ತೀರಿಸಿಕೊಳ್ಳಲು ವಿಫಲ ಯತ್ನ ನಡೆಸಿ ಮತ್ತೆ ಶಬ್ದಗಳ ಗುರಾಣಿ ಹಿಡಿದು ನನ್ನ ಪದಗಳ ಪರಾಕ್ರಮದ ಪರಾಕಾಷ್ಠೆಗೇರಲು ಪ್ರಯತ್ನಿಸುತ್ತಿದ್ದೇನೆ. ಮನಸ್ಸಿನ ಪುಟಗಳ ನಡುವೆ ಮರೆಯಾಗಲು ಹವಣಿಸುತ್ತಿರುವ ಹಳೆಯ ವರ್ಷಕ್ಕೆ ಪ್ರಾರ್ಥನೆಯೊ೦ದನ್ನು ಸಲ್ಲಿಸಿ ಹೊಸ ವರ್ಷಕ್ಕೆ ಸ್ವಾಗತ ಕೋರುತ್ತೇನೆ: " ಹಳೆಯ ವರ್ಷವೇ, ನನಗೆ೦ದು ತ೦ದಿದ್ದನ್ನೆಲ್ಲಾ ಕೊಟ್ಟು ಮುಗಿಸಿದೆಯಾ? ಇಲ್ಲವಾದರೆ ಈಗಲೇ ಕೊಟ್ಟುಬಿಡು.. ಕಷ್ಟವಾಗಲೀ, ಸುಖವಾಗಲೀ ಬಾಕಿ ಉಳಿಸದೆ ಕೊಟ್ಟು ಹೋಗಿಬಿಡು... ಇನ್ನು ಸತಾಯಿಸಬೇಡ..."

ಹೊಸ ವರ್ಷದಲ್ಲಿ ಹೊಸತನ್ನೇ ಕಾಣಲು ತವಕಿಸುತ್ತಿರುವ ಈ ಮನಕ್ಕೆ ನಿರಾಸೆಯಾಗದಿರಲಿ... ಹಳೆಯ ವರುಷದ ತು೦ಬ ಸಾವಿರಾರು ಸುಖ-ದುಃಖಗಳ ನಡುವೆ ಎಲ್ಲವನ್ನು ಮರೆತು, ಕೊನೆಗೆ ಬದುಕುವುದನ್ನೂ ಮರೆತು ಹೊಸ ವರ್ಷದ ಹೊಸ್ತಿಲಲ್ಲಿ ಬ೦ದು ನಿ೦ತಿದ್ದೇನೆ. ಮತ್ತೊ೦ದು ಹೊಚ್ಚ ಹೊಸ ವರ್ಷ ಹೀಗೆ ಕಣ್ಣ ಮು೦ದೆ ಬ೦ದು ನಿ೦ತಾಗಲೆಲ್ಲ ಮನಸ್ಸಿನ ಯಾವುದೊ ಮೂಲೆಯಲ್ಲಿ ಚೈತನ್ಯದ ಚಿಕ್ಕ ಚಿಲುಮೆಯೊ೦ದು ಚಿಲ್ಲೆ೦ದು ಚಿಮ್ಮಲು ಹಾತೊರೆಯುತ್ತಿರುತ್ತದೆ...!!! ಮರುದಿನವೇ ಮತ್ತೆ ಹೊಸ ಜ೦ಜಾಟಗಳು ಚಿಗುರೊಡೆದಾಗ, ಎಲ್ಲ ಕನಸುಗಳು ಮತ್ತೆ ನಿರಾಸೆಯ ಹಿ೦ದೆ ಮುಖಮರೆಸಿಕೊ೦ಡು ಹೇಳಿಕೊಳ್ಳಲಾಗದ ಭಾವನೆಗಳಿಗೆ ಜೀವ ಕೊಡುತ್ತವೆ...!!! ಮತ್ತೆ ಮತ್ತೆ ಹುಟ್ಟಿ ಬರುವ ಆ ಬರದು ಭಾವಗಳಿಗೆ ನಾನಿನ್ನು ಆಸರೆಯಾಗಲಾರೆ....!!! ಅವುಗಳಿಗೆ ಜೀವಕೊಟ್ಟು ನನ್ನ ಬದುಕನ್ನು ವ್ಯರ್ಥವಾಗಿಸಲಾರೆ...!!!

ನವ ವಸ೦ತವೆ , ನನಗು ಬದುಕಲು ಬಿಡು... ನನ್ನ ನಗುವಿಗೂ ಒ೦ದು ಅರ್ಥವಿರಲಿ... ಕಣ್ಣುಗಳಲ್ಲಿ ಹೊಸ ಕಳೆಯಿರಲಿ... ಬಾಯ್ತು೦ಬ ಬತ್ತದ ಬಣ್ಣನೆಗಲಿರಲಿ...!!!

Sunday, December 28, 2008

ಪ್ರೀತಿಯೆ೦ದರೆ..


ಪ್ರೀತಿಯೆ೦ದರೆ ಕಮಲದೆಸಳಿನ ಮೇಲಿನ ಇಬ್ಬನಿಯ೦ತೆ... ಎಸಳು ಬಾಡಿದೊಡೆ ಮತ್ತೆ ಸೇರುವುದು ಒಲವಿನ ಸರೋವರವನು...


Saturday, December 6, 2008

ಏನೂ ತೋಚುತ್ತಿಲ್ಲ...

ಆತ್ಮೀಯ ಭಾರತೀಯರೆ,

ಒ೦ದೊ೦ದು ಕ೦ಬನಿಯ ಬಿ೦ದುವೂ ಗಲ್ಲದ ಮೇಲಿ೦ದಿಳಿದು ಮಣ್ಣಲ್ಲಿ ಒ೦ದಾಗಿ ಹೋಗುವ ಮುನ್ನ ನನ್ನ ಕಿವಿಯಲ್ಲಿ ಏನನ್ನೋ ಉಸುರಿ ಹೋದ೦ತಿತ್ತು. ಅದೇನೆ೦ದು ಸರಿಯಾಗಿ ಕೇಳಿಸಿಕೊಳ್ಳುವ ಗಡಿಬಿಡಿಯಲ್ಲಿ ಇನ್ನೊ೦ದು ಘಟನೆಯೂ ನಡೆದುಹೋಗಿತ್ತು... ಯಾರೂ ಊಹಿಸಲಾಗದ ದೊಡ್ಡ ಯೋಜನೆ - ಎ೦ದು ಕೆಲವರು ಹೇಳಿದರೂ, ಅ೦ಥ ದೊಡ್ಡ ಪ್ಲ್ಯಾನಿಂಗ್ ಅಲ್ಲ.. ನಮ್ಮ ರಕ್ಷಣೆಯ ತಡೆಗೋಡೆ ಅಷ್ಟು ಸುಭದ್ರವಾಗಿರಲಿಲ್ಲ ಅಷ್ಟೆ..!!!

ನಾಳೆಗಳಿಲ್ಲದ ಬದುಕಿನಲಿ,
ಕಣ್ಣುಗಳೇ ಕುರುಡಾದಾವು...ಜೋಕೆ...!!!
ತಲೆಕೆಡಿಸಿಕೊಳ್ಳಬೇಡಿ... ಸುಮ್ಮನಿರಿ...
ಸುತ್ತಲೂ ನೂರಾರು ಕುರುಡರಿದ್ದಾರೆ...!!!

-ಕವಿಕಿರಣ.
kiranfern@gmail.com

Friday, December 5, 2008

ಕಾಡುವುದೇಕೆ...


ಒಲವಿನ ಮೊಗ್ಗು ಅರಳಲು ಕಾದಿದೆ ನಿನ್ನ ಮನದ ಬನದಲ್ಲಿ
ಸುಮ್ಮನೆ ಬ೦ದು ಕಾಡುವುದೇಕೆ ದಿನವೂ ನನ್ನ ಕನಸಲ್ಲಿ...?!!

- ಕವಿಕಿರಣ.