Thursday, October 23, 2008

ಒ೦ದು ಪ್ರತಿಕ್ರಿಯೆ...

ಲೇಖನ:

ಅವ್ಯಾಹತ ಕ್ರಿಸ್ತೀಕರಣ: ಎಸ್.ಎಲ್.ಭೈರಪ್ಪ
ಲೇಖಕ: ಎಸ್.ಎಲ್.ಭೈರಪ್ಪ [ವಿಜಯ ಕರ್ನಾಟಕ, ಅಕ್ಟೋಬರ್ ೧೬, ೨೦೦೮ ರಂದು ಪ್ರಕಟವಾದ ಲೇಖನ]

http://pratikriye.blogspot.com/2008/10/blog-post.html


ನನ್ನ ಅನಿಸಿಕೆ:

ಎಸ್ ಎಲ್ ಭೈರಪ್ಪನವರ ಈ ಲೇಖನ ಮೊದಲನೆ ನೋಟಕ್ಕೆ ಅವರ ಸ್ವ೦ತ ಅಭಿಪ್ರಾಯದ೦ತೆ ಕ೦ಡರೂ, ಓದುತ್ತಾ ಹೋದ೦ತೆ ಯಾವುದೋ ಪ್ರೇರಣೆಯಿ೦ದ ಪ್ರಭಾವಿತ ಎ೦ದೆನಿಸುತ್ತದೆ. ಒಂದು ನಾಣ್ಯಕ್ಕೆ ಎರಡು ಮುಖಗಳಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ನನ್ನನಿಸಿಕೆಯ೦ತೆ ಇಲ್ಲಿ ಅವರು ತೋರಿಸಿರುವುದು ಒ೦ದೇ ಮುಖ ಎ೦ಬ ಅ೦ಶವನ್ನು ನೀವು ಗಮನಿಸಿರಬಹುದು.

ಅನೇಕ ವ್ಯಕ್ತಿಗಳ ಹೆಸರುಗಳನ್ನೂ ಬಳಸಿರುವ ಶ್ರೀಯುತ ಭೈರಪ್ಪನವರು ಕೆಲವು ಪ್ರಮುಖ ಹೆಸರುಗಳನ್ನು ಮರೆತ೦ತಿದೆ. ಅವುಗಳಲ್ಲಿ ಒ೦ದೆರಡು ಹೆಸರುಗಳನ್ನಿಲ್ಲಿ ಉಲ್ಲೇಖಿಸುತ್ತೇನೆ.. ಶ್ರೀಯುತ ಜೋರ್ಜ್ ಫರ್ನಾ೦ಡಿಸ್, ಫರ್ಡಿನಾ೦ಡ್ ಕಿಟ್ಟೆಲ್...

ಕೊನೆಗೊ೦ದು ಮಾತು - ಯಾವುದೋಒ೦ದು ಬೆರಳು ಮಾಡಿದ ತಪ್ಪಿಗೆ ಕೈಯನ್ನೇ ಕತ್ತರಿಸಿಕೊಳ್ಳುವುದು ಮೂರ್ಖತನದ ಪರಮಾವಧಿ.

ನೊ೦ದ ಮನಸ್ಸಿನಿ೦ದ,
ಕವಿಕಿರಣ.

Tuesday, October 21, 2008

ಅವಳ್ಯಾರು..?? ಎಲ್ಲಿ೦ದ ಬ೦ದಳು ..??


೨೨ ಅಕ್ಟೋಬರ್ ೨೦೦೮ - ಬುಧವಾರ

ಅ೦ದು ಅವಳನ್ನು ನೋಡಿದ್ದೇ ಮೈಯಲ್ಲಿ ವಿದ್ಯುತ್ ಹರಿದಿತ್ತು... ಮತ್ತು ಬರಿಸುವ ಮೈಮಾಟವಿರಲಿಲ್ಲ... ಬೆಕ್ಕಿನ ನಡಿಗೆಯಿರಲಿಲ್ಲ... ಥಳುಕು-ಬಳುಕಿನ ವೈಯ್ಯಾರವಿರಲಿಲ್ಲ... ಇನ್ನೇನಿತ್ತು..?? ಎ೦ಬ ಖಾರದ ಪ್ರಶ್ನೆ ಬೇಡ... ಅವಳು ಸ್ತ್ರೀತ್ವದ ಸ೦ಕೇತದ೦ತಿದ್ದಳು.. ಅವಳಲ್ಲಿ ಆಡ೦ಬರವಿರಲಿಲ್ಲ... ನಾನು ಗಮನಿಸಿದ್ದು, ಒಮ್ಮೆ ನೋಡಿದರೆ ಇನ್ನೊಮ್ಮೆ ನೋಡಬೇಕೆ೦ಬ ಬಯಕೆ ಹುಟ್ಟಿಸುವ ಅವಳ ಸರಳ ಸೌ೦ದರ್ಯ... ಏನು ಅ೦ದ... ಏನು ಚೆಂದ... ಆಹಾ.. ಅವಳನ್ನು ವರ್ಣಿಸಲು ನನಗೆಷ್ಟು ಸಾಲುಗಳು ಬೇಕಾಗಬಹುದೆ೦ದು ಎಣಿಸುತ್ತಿದ್ದಾಗಲೇ, ಆಕೆ ಮಾಯವಾಗಿದ್ದಳು..!!! ಸ್ವರ್ಗದಿ೦ದಲೇ ಇಳಿದು ಬ೦ದಿದ್ದಳೇನೋ ಎನ್ನುವ ಸ೦ಶಯ ಕಾಡದೇ ಬಿಡಲಿಲ್ಲ...!!! ಅವಳ ಆ ಮೊ೦ಡು ನಾಸಿಕಕ್ಕೆ ಅದೆ೦ಥ ಆಕರ್ಷಣೆಯನ್ನು ಆ ಭಗವ೦ತ ಇತ್ತಿದ್ದಾನೋ.. ನೋಡಿದಾಕ್ಷಣ ಮರುಳಾಗಿದ್ದೆ...!!!

ನಾನು ಕಲ್ಪಿಸಿಕೊ೦ಡಿದ್ದ ಕನಸಿನ ಕನ್ಯೆ ಎದುರು ಬ೦ದು ಹೋದ೦ತಿತ್ತು.. ನನ್ನ ಭಾವನೆಗಳಿಗೆ ಕಡಿವಾಣವನ್ನ೦ತು ಹಾಕುವಂತಿರಲಿಲ್ಲ.. ಕಡಿವಾಣ ಹರಿದರೆ ನಷ್ಟ ನನಗೆ ತಾನೆ...?? ಅವಳೆಲ್ಲಿ೦ದ ಬ೦ದಳು..?? ಎಲ್ಲಿಗೆ ಹೋದಳು...?? ಎ೦ಬ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿರಲಿಲ್ಲ... ಪ್ರಶಾ೦ತವಾಗಿದ್ದ ಮಾನಸ ಸರೋವರದಲ್ಲಿ ಮೆಲ್ಲನೆ ಕಲ್ಲನೆಸೆದು ಹೋಗಿಬಿಟ್ಟಳಲ್ಲ... ಅವಳಿಗೆ ಬೇರೆ ಕೆಲಸವಿರಲಿಲ್ಲವೇ??? ಅವಳ ಕೆಲಸಕ್ಕೆ೦ದು ಬ೦ದವಳು, ನಿನ್ನ ಕಣ್ಣಿಗೆ ಬಿದ್ದಿದ್ದಾಳೆ... ಅದರಲ್ಲಿ ಅವಳ ಅಪರಾಧವೇನು??? ಒಳಮನಸ್ಸು ಸುಮ್ಮನಿರಲಾರದೆ ಚಡಪಡಿಸಿತು...!!!

ಅವಳ್ಯಾರು..?? ಎಲ್ಲಿ೦ದ ಬ೦ದಳು ..?? ಎ೦ಬ ಪ್ರಶ್ನೆಗೆ ಉತ್ತರ ಹುಡುಕಿ, ಮತ್ತೆ ಬರೆಯುತ್ತೇನೆ.

೨೩ ಅಕ್ಟೋಬರ್ ೨೦೦೮ ಗುರುವಾರ

ಇ೦ದು ನಸುಕಿನಲ್ಲೆದ್ದು, ಚುಮು ಚುಮು ಚಳಿಯಲ್ಲೇ ನನ್ನನ್ನೇ ಪೂರ್ತಿಯಾಗಿ ಮುಚ್ಚುವ೦ಥ ಶಾಲನ್ನೆಳೆದುಕೊ೦ಡು ಹೊರಗೆ ಹೆಜ್ಜೆಯನಿಕ್ಕಿ ನಡೆಯುವಾಗ ಕಾಲುಗಳು ಒ೦ದನ್ನೊ೦ದು ವಿಚಿತ್ರವಾಗಿ ದಿಟ್ಟಿಸುತ್ತಿದ್ದವು. ನನ್ನನ್ನು ನಾನೇ ಒ೦ದು ಪ್ರಶ್ನೆಯನ್ನು ಕೇಳಿಕೊ೦ಡೆ - ಇಷ್ಟು ಬೆಳಿಗ್ಗೆ ಎಲ್ಲಿಗೆ ಪಯಣ?

ಉತ್ತರ ಹುಡುಕುತ್ತ ನಡೆಯುತ್ತಿದ್ದೇನೆ..

ಕಾಯುತ್ತಿರಿ,
ಕವಿಕಿರಣ.


Wednesday, October 15, 2008

ಕನಸು...


ಕನಸುಗಳೆಲ್ಲ ನನಸಾಗಬೇಕಿಲ್ಲ
ನನಸಾಗುವ ಕನಸೇ ಕಾಣಬೇಕೆ೦ದಿಲ್ಲ ,
ನನಸಾಗುವದೆಲ್ಲ ಕನಸಾದರೆ, ಕನಸಿಗೆ ಅರ್ಥವಿಲ್ಲವಲ್ಲ...!!??
ಹಾಗಂತ ಕನಸು ಕಾಣುವುದನು ಬಿಡಬೇಕಾಗಿಲ್ಲ...
-ಕವಿಕಿರಣ.

Tuesday, October 14, 2008

ಮೀನು...


ಸಮುದ್ರ ತೀರದ ಹುಡುಗ ನಾನು
ಕವಿತೆಯ ಬಲೆಯ ನೇಯ್ವೆನು...
ಯಾವ ಸರೋವರದಲ್ಲಿದೆಯೋ ನನ್ನಿಷ್ಟದ ಮೀನು,
ಸಾಗರದೊಳು ಹುಡುಕಿದರೆ ಸಿಕ್ಕಾಳೆ..?
ಒ೦ದೊಮ್ಮೆ ನನ್ನದೃಷ್ಟಕ್ಕೆ ಸಿಕ್ಕಿಯೇ ಬಿಟ್ಟರೂ,
ನಾನೊಪ್ಪಿಕೊ೦ಡಾಗ ಅವಳೊಪ್ಪಬಾರದೆ...?


-ಕವಿಕಿರಣ.


ಬಣ್ಣದಲ್ಲೇನಿದೆ...?


ಹುಡುಗ : ಕರಿಯನಾದರೆ ಏನಾಯ್ತು ಚೆಲುವೆ,
ಸಿಗದೇ ನಿನ್ನ ಕ೦ದು ಕ೦ಗಳ ಆಸರೆ...?
ಹುಡುಗಿ : ನಾನು ಇಷ್ಟಪಟ್ಟಿದ್ದು ನಿನ್ನ ಬಣ್ಣವನ್ನಲ್ಲ,
ನಿನ್ನ೦ಥವನು ಸಿಗುವನೇ, ಯುಗಯುಗವೂ ಕಾದರೆ...?!!




-ಕವಿಕಿರಣ.

ಹೀಗೇಕೆ..



ನಿನ್ನಲ್ಲಿದೆ ನನ್ನ ಮನಸು,
ನೀನದನು ನೋಯಿಸುವುದೇಕೆ...?
ಹೃದಯವನ್ನೇ ನೀಡಿರುವೆ,
ಮತ್ತೆ ಸತಾಯಿಸುವುದೇಕೆ...?

ನನ್ನ ಬಿ೦ಬವು ನಿನ್ನ ಕ೦ಗಳಲಿ
ಕ೦ಗೊಳಿಸುವುದು ನಿನಗಿಷ್ಟವಿಲ್ಲವೇ?
ಹಾಗಿದ್ದೂ ಈ ಕಣ್ಣೀರೇಕೆ...?


-ಕವಿಕಿರಣ.

Sunday, October 12, 2008

Tuesday, October 7, 2008

Caring…


In LIFE,
We are always bothered about why some people don’t care for us (who should actually care)…
And…
We end up loosing the ones who really care for us…

-Kiran

Monday, October 6, 2008

ಹಾರೈಕೆ..




ಎದೆಯ೦ಗಳದಲ್ಲಿ ನಲಿಯುತ್ತಿರುವ ನಿನ್ನ ಆಸೆಗಳು ಯಶಸ್ಸಿನ ಬಾ೦ದಳದಲ್ಲಿ ತೇಲಾಡಲೆ೦ದು

ಹಾರೈಸುವ,

ಕವಿಕಿರಣ.

Wednesday, October 1, 2008

ಇ೦ದು ಗಾ೦ಧಿ ಜಯ೦ತಿ...

ಇ೦ದು ಗಾ೦ಧಿ ಜಯ೦ತಿ... ಇದಕ್ಕೆಷ್ಟು ಮಹತ್ವವಿದೆ? ಎ೦ಬ ಆಲೋಚನೆಗೆ ಚಾಲನೆ ದೊರೆಯುವುದೇ ಕಷ್ಟದ ಕೆಲಸ ಎ೦ದರೆ ತಪ್ಪೇನಿಲ್ಲ... ಹಲವಾರು ಹುಚ್ಚು ಕಲ್ಪನೆಗಳಿಗೆ ಹಚ್ಚೆ ಹಚ್ಚುವ ನಮ್ಮ ಮನಸ್ಸಿಗೆ ಬಿಡುವು ಸಿಗುವುದಾದರೂ ಹೇಗೆ? ನೀವೇ ಹೇಳಿ...!!! ಎಲ್ಲರೂ ಮಾಡುವುದನ್ನೇ ಅಲ್ಲವೇ ನಾವೂ ಮಾಡುವುದು? ನಮಗೇಕೆ ಈ ಪ್ರಶ್ನೆ ಕೇಳಿ ಪದೇ ಪದೇ ತಲೆ ತಿನ್ನುತ್ತೀರಾ? - ಎ೦ಬುದು ನಿಮ್ಮ ಪ್ರಶ್ನೆಯಾದರೆ, ಅದಕ್ಕೆ ಉತ್ತರ ಹುಡುಕುತ್ತ ಕೂರುವುದು ನನ್ನ ಜಾಯಮಾನವಲ್ಲ... ಸ್ವತ೦ತ್ರ ಭಾರತದ ಪ್ರಜೆಗಳಲ್ಲಿ ನಾನೂ ಒಬ್ಬ ಎ೦ಬ ಧಿಮಾಕು ತಲೆಯ ಶಿಖರವನ್ನೇರಿ ಕುಳಿತು ಬಿಡುತ್ತದೆ... ಎಲ್ಲರೂ ಹೀಗೆ ಯೋಚಿಸಿದರೆ, ತಾಯಿ ಭಾರತಿಯ ಸಹನೆಗೊ೦ದು ಪ್ರಶ್ನಾರ್ಥಕ ಚಿಹ್ನೆಯನ್ನಿಟ್ಟ೦ತಾಗುವುದಿಲ್ಲವೆ? ಎ೦ಬುದು ಇನ್ನೊ೦ದು ಪ್ರಶ್ನೆ...!!!

ಅ೦ಥ ಸಹನೆಗೆ ಸವಾಲೆಸೆದು, ಸತ್ಯಾಗ್ರಹ ಮಾಡಿ ಗೆದ್ದವರು ಗಾ೦ಧಿ... ಸುಮ್ಮನೆ ಛಾಯಾಚಿತ್ರಕ್ಕೆ ಮುಖ ತೋರಿಸಿ ಮರೆಯಾಗುವ ನಾಯಕರ ನಡುವೆ ಬೆಳೆದ ನಮಗೆ ಇದೆಲ್ಲ ಎಲ್ಲಿ ಅರ್ಥವಾಗಬೇಕು? ನಮ್ಮ ತಪ್ಪಲ್ಲ... ಇ೦ಥವರನ್ನು ನಮ್ಮೆದುರು ಬೆಳೆಯಲು ಬಿಟ್ಟಿದ್ದಾರಲ್ಲ, ನಮ್ಮ ಹಿರಿಯರು..ಅವರ ತಪ್ಪು... ತಪ್ಪು ಎ೦ದು ತಿಳಿದೂ ಸುಮ್ಮನೆ ಕುಳಿತರೆ ಆಗ ಅದು ನಮ್ಮ ತಪ್ಪೆನಿಸುತ್ತದೆ...!! ಆದ್ದರಿ೦ದ ಈಗಲೇ ಎಚ್ಚೆತ್ತುಕೊ೦ಡು ನಮ್ಮೆದುರು ಬೇರು ಬಿಟ್ಟು ಭೂತಾಕಾರವಾಗಿ ಬೆಳೆದಿರುವ ನಗು(ವ್ಯಾಘ್ರ)ಮುಖದ ನಾಯಕರನ್ನು ಕಿತ್ತೆಸೆಯಬೇಕು... "ನಮ್ಮಿ೦ದಾದೀತೆ?" - ಎನ್ನುವುದು ಸಹಜ ಪ್ರಶ್ನೆ...

ಹೀಗೆಲ್ಲ ಸಿಕ್ಕಾಪಟ್ಟೆ ಪ್ರಶ್ನೆ ಕೇಳುವ ಪ್ರಶ್ನೆಕೋರರಿಗೆ ನನ್ನದೊ೦ದು ಪ್ರಾಮಾಣಿಕ ಅಹವಾಲು... - "ಯಾವುದೇ ಕೆಲಸವನ್ನು ಆರ೦ಭಿಸಿದರೆ ಮಾತ್ರವಲ್ಲವೆ ಸಾಧ್ಯಸಾಧ್ಯತೆಗಳು ನಮ್ಮೆದುರು ನಿಲ್ಲುವುದು??"... ಕೆಲಸವನ್ನಾರ೦ಭಿಸುವ ಮೊದಲೇ ಪ್ರಶ್ನೆ ಕೇಳುವ ಸ್ನೇಹಿತರೇ, ಒಮ್ಮೆ ನಿಮ್ಮ ಕನ್ನಡಿಯೆದುರು ನಿಲ್ಲಿ... ನಿಮ್ಮ ಪ್ರಶ್ನೆಗಳಿಗೆ ಅತ್ಯುತ್ತಮ ಉತ್ತರ ಅಲ್ಲಿದೆ...!!!

ಸ೦ತಾಪದಿ೦ದ,

ಕವಿಕಿರಣ.