ಗೆಳೆತನ ಎ೦ದೊಡನೆ ಕೃಷ್ಣ-ಸುದಾಮರ ಉದಾಹರಣೆಗಳನ್ನೇ ಕೇಳಿ ಬೆಳೆದ ನನಗೆ ಇ೦ದು ಬೇಜಾರಾಗಿದೆ... ಕಾರಣ ಇಷ್ಟೇ, ಯಾವ ಹುಡುಗನನ್ನು ನೋಡಿದರೂ ಹುಡುಗಿಯೊಬ್ಬಳ ಸಾ೦ಗತ್ಯದಲ್ಲಿ ಮೈಮರೆತು ವರ್ತಿಸುವುದು..ಸುತ್ತಲು ಯಾರಿದ್ದಾರೆ ಎ೦ಬುದನ್ನು ಗಮನಿಸದೆ...!!! ಸಾರ್ವಜನಿಕ ಸ್ಥಳಗಳಲ್ಲಿ ಇವರಿಗೇನು ಅ೦ಥ ಕೆಲಸ? ಎ೦ಬ ಪ್ರಶ್ನೆ ಭೂತಾಕಾರವಾಗಿಯೇ ಉಳಿದುಬಿಟ್ಟಿದೆ...
ಜೊತೆ ಇರುವಾಕೆ ಯಾರೆಂದು ಯಾರು ಕೇಳಿದರೂ ಉತ್ತರ ಶತಸಿದ್ಧ...!!!
"ಆಕೆ ನನ್ನ ಫ್ರೆಂಡ್ "...!!! ಎಲ್ಲಿ೦ದ, ಹೇಗೆ ಫ್ರೆಂಡ್ ಆದಳು ಎ೦ಬುದು ಇನ್ನೂ ಸ್ವಾರಸ್ಯದ ಸ೦ಗತಿ...!!!
"ಆವತ್ತು ಒ೦ದಿನ ನನ್ನ ಫೋನಿನಿ೦ದ ಬೈ ಮಿಸ್ಟೇಕ್ ಮಿಸ್ ಕಾಲ್ ಹೋಗಿಬಿಡ್ತು...!!! ಮೊದಲು ಹೆದರಿಕೆ ಆಯ್ತು. ಸ್ವಲ್ಪ ಹೊತ್ತಾದ ಮೇಲೆ, ಹೂ ಇಸ್ ದಿಸ್? ಅ೦ತ ಎಸ್ ಎಂ ಎಸ್ ಬ೦ತು. ಅದಕ್ಕೆ ರಿಪ್ಲೈ ಮಾಡಿದೆ... ಎಸ್ ಎಂ ಎಸ್ ಕೊನ್ವರ್ಸೆಶನ್ ಹಾಗೆ ಮು೦ದುವರಿದು ಫ್ರೆಂಡ್ಸ್ ಆಗ್ಬಿಟ್ವಿ.. ಈಗ ಆಲ್ಮೋಸ್ಟ್ ಎರಡು ತಿ೦ಗಳು ಕಳೆದುಹೋಗಿದೆ. ಕ್ಲೋಸ್ ಫ್ರೆಂಡ್ಸ್ ಆಗಿದಿವಿ.."
- ಇದು ಸಹಜ ಮಾತುಕತೆ. ಸಹಜವಾದರೂ ಕೆಲವೊಮ್ಮೆ ಹುಚ್ಚು ಹಿಡಿಸಿಬಿಡುತ್ತೆ.
ಮನೆಯಲ್ಲಿ ಅಷ್ಟೊ೦ದು ಜನರಿದ್ದರೂ, ಅವರ ಹತ್ತಿರ ಮಾತನಾಡಲು ಸಮಯವಿಲ್ಲ. ಅ೦ಥಾದ್ದರಲ್ಲಿ ಫ್ರೆಂಡ್ ಬೇರೆ ಕೇಡು... ಅದೂ ಹುಡುಗಿ ಬೇರೆ... ಶಿವ ಶಿವಾ...!!! ಹತ್ತು ಹನ್ನೆರಡು ವರ್ಷಗಳಿ೦ದ ಜೊತೆಗಿದ್ದ ಬಾಲ್ಯದ ಗೆಳೆಯನನ್ನೇ ಮರೆತು ಎರಡು ಎಸ್ ಎಂ ಎಸ್-ಗಳ ಸು೦ದರಿಯ ಹಿ೦ದೆ ಓಡುವ ಈ ಹುಡುಗರ ಮ೦ದಬುದ್ಧಿಗೆ ನಗುವುದೋ, ಅಳುವುದೋ...ನಾ ಕಾಣೆ...!!! ಗೆಳೆಯ ಕರೆದಾಗ "ಬ್ಯುಸಿ" ಎನ್ನುವ ಇವರು, ಗೆಳತಿ ಕರೆದಾಗ "ಬ್ಯೂಟಿ" ಅ೦ತ ಓಡುತ್ತಾರೆ...!!!
ಇ೦ಥವರ ಸ್ನೇಹದಲ್ಲಿ ಸುದಾಮನ ಅವಲಕ್ಕಿ ಹುಡುಕಿ ಹೊರಡುವ ನನ್ನ೦ಥವರಿಗೆ ತಕ್ಕ ಶಾಸ್ತಿ ಆಗಿಯೇ ತೀರುತ್ತದೆ ಎನ್ನುವುದು ನನ್ನ ಅನುಭವದ ನುಡಿ...!!!
ನೊ೦ದ ಮನಸ್ಸಿನಿ೦ದ,
ಕವಿಕಿರಣ.
No comments:
Post a Comment