Thursday, September 18, 2008

ನಿಜ ಸುಖ...

ಕಷ್ಟಪಟ್ಟು ಆನ೦ದವನ್ನು ಗಳಿಸಿ ಕೊ೦ಡವರಿಗೆ ಮಾತ್ರ ಗೊತ್ತು ಅದರ ನಿಜವಾದ ಮೌಲ್ಯ...
ಅದ್ದರಿ೦ದ, ನೀವು ಪಡುವ ಕಷ್ಟಗಳಿಗಾಗಿ ಮರುಗಬೇಡಿ...
ಅವು ನಿಮಗೆ ನೀಡುವ ಸುಖವು ನಿಮ್ಮ ಜೀವನದ ಅತ್ಯಮೂಲ್ಯ ಸ೦ಗತಿಗಳಲ್ಲಿ ಒ೦ದು..

ಸ೦ತೋಷವು ನಿನ್ನ ಮುಖದ ನಗುವಿನಲ್ಲಿ ಎ೦ದೆ೦ದೂ ಹರ್ಷಿಸುತ್ತಿರಲಿ...
-ಕವಿಕಿರಣ

ಕಾಣದೆ ಕಾಡುವ ಬೆಡಗಿ...

ಕ೦ಗಳಿಗೆ ಕಾಣಿಸದೆ ಕಾಡುವ ಬೆಡಗಿ,

ಎಲ್ಲಡಗಿ ಕುಳಿತಿರುವೆ?

ಒಮ್ಮೆ ಬ೦ದೆನ್ನ ಮು೦ದೆ ನಿಲ್ಲು,

ನೀ ಮರಳಿ ಹೋಗಲಾರೆ...!!!

Wednesday, September 17, 2008

ಯಾಕೆ ಭಯ..??

ಇಲ್ಲವೆಂದು ಜೀವನದಲಿ ಪ್ರಗತಿ,
ಹೆದರಬೇಡವೆ ನೀನು ಗೆಳತಿ..
ನೀನೇ ಹಚ್ಚಬೇಕು ಬದುಕಿನ ಹಣತಿ..
ಒಂದು ದಿನ ನೀನೂ ಕಾಣುತಿಯ ಉನ್ನತಿ...!!

-ಕವಿಕಿರಣ

ನೀ ಬಿಟ್ಟು ಹೋದ ಮೇಲೆ...

ಮನಸಿನ ಗುಡಿಯೊಳಗಿದ್ದ ನೆನಪುಗಳನ್ನೆಲ್ಲ ಝಾಡಿಸಿ ಒದ್ದು,
ನಿನ್ನನು ಕರೆದು ಕೂರಿಸಿದೆ ನಾನು...
ಈಗ ಪಶ್ಚಾತ್ತಾವಾಗುತ್ತಿದೆ ನನಗೆ ನೀ ಬಿಟ್ಟು ಹೋದ ಮೇಲೆ,
ನನ್ನ ನೆನಪುಗಳ ಒಲವೆ ನನಗೆ ಮೇಲೆ೦ದು...!!!

-ಕವಿಕಿರಣ.

A Question...

There r 2 situaqtions..

In the first situation, u get married & then achieve success with ur wife's support & get a better undrstanding & better life...

And, in the second situation, u alone achieve success & get a nice beautiful girl with the help of ur achievement & lead ur life...

Which situation u wud prefer & why?

Waiting for ur valuable answers,
Kiran

Tuesday, September 16, 2008

ಮು೦ಗಾರು ಮಳೆ...


ಮುಂಗಾರು ಮಳೆಯೇ.. ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೆ, ಧರೆಯ ಕೊರಳ ಪ್ರೇಮದ ಮಾಲೆ ಸುರಿವ ಒಲುಮೆ ಆ ಜಡಿ ಮಳೆಗೆ, ಪ್ರೀತಿ ಮೂಡಿದೆ...
ಯಾವ ಚಿಪ್ಪಿನಲ್ಲಿ , ಯಾವ ಹನಿಯು ಮುತ್ತಾಗುವುದೋ ... ಒಲವು ಎಲ್ಲಿ ಕುಡಿಯೊಡೆಯುವುದೋ, ತಿಳಿಯದಾಗಿದೆ ...

ಮುಂಗಾರು ಮಳೆಯೇ ..ಏನು ನಿನ್ನ ಹನಿಗಳ ಲೀಲೆ
ಭುವಿ ಕೆನ್ನೆ ತುಂಬ , ಮುಗಿಲು ಸುರಿದ ಮುತ್ತಿನ ಗುರುತು..
ನನ್ನ ಎದೆಯ ತುಂಬ , ಅವಳು ಬಂದ ಹೆಜ್ಜೆಯ ಗುರುತು..
ಹೆಜ್ಜೆ ಗೆಜ್ಜೆಯಾ ಸವಿ ಸದ್ದು ಪ್ರೇಮನಾದವೂ...
ಎಡೆ ಮುಗಿಲಿನಲ್ಲಿ , ರಂಗು ಚೆಲ್ಲಿ ನಿ೦ತಳು ಅವಳು.. ಬರೆದು ಹೆಸರು ಕಾಮನಬಿಲ್ಲು , ಏನು ಮೋಡಿಯೋ...

ಮುಂಗಾರು ಮಳೆಯೇ ..ಏನು ನಿನ್ನ ಹನಿಗಳ ಲೀಲೆ
ಯಾವ ಹನಿಗಳಿಂದ , ಯಾವ ನೆಲವು ಹಸಿರಾಗುವುದೋ ಯಾರ ಸ್ಪರ್ಶದಿಂದಾ , ಯಾರ ಮನವು ಹಸಿವಗುವುದೋ ..
ಯಾರ ಉಸಿರಲಿ ಯಾರ ಹೆಸರೋ ಯಾರು ಬರೆದರೋ ಯಾವ ಪ್ರೀತಿ ಹೂವು ,
ಯಾರ ಹೃದಯದಲ್ಲಿ ಅರಳುವುದೋ ಯಾರ ಪ್ರೇಮ ಪೂಜೆಗೆ ಮುಡಿಪೋ , ಯಾರು ಬಲ್ಲರೂ

ಮುಂಗಾರು ಮಳೆಯೇ ..ಏನು ನಿನ್ನ ಹನಿಗಳ ಲೀಲೆ
ಒಲವ ಚಂದಮಾಮ ನಗುತ ಬಂದ ಮನದಂಗಳಕೆ ಪ್ರೀತಿ ಬೆಳಕಿನಲ್ಲಿ, ಹೃದಯ ಹೊರಟಿದೆ ಮೆರವಣಿಗೆ ಅವಳ ಪ್ರೇಮದೂರಿನಕದೆಗೆ, ಪ್ರೀತಿ ಪಯಣವೂ..
ಪ್ರಣಯ ದೂರಿನಲ್ಲಿ , ಕಳೆದು ಹೋಗೋ ಸುಖವ ಇಂದು ಧನ್ಯನಾದೆ ಪಡೆದುಕೊಂಡು ಹೊಸ ಜನ್ಮವೂ

ಮುಂಗಾರು ಮಳೆಯೇ ..ಏನು ನಿನ್ನ ಹನಿಗಳ ಲೀಲೆ...!!!

ಪ್ರೀತಿಯ ಬಗ್ಗೆ ಒ೦ದೆರಡು ಮಾತು...


ಜಗತ್ತಿನಲ್ಲಿ ಎಲ್ಲರೂ ಬಯಸುವ ಅತಿ ಮಹತ್ವದ ಒ೦ದೇ ಒ೦ದು ಅನುಭವ - ಪ್ರೀತಿ... ಎಲ್ಲರೂ ಹೇಳುವ೦ತೆ ಅದು ವಸ್ತುವಲ್ಲ, ಭಾವನೆಯಲ್ಲ... ಅದು ಬರೀ ಅನುಭವವಷ್ಟೇ ಎನ್ನುವುದು ಹಲವರಿಗಿನ್ನೂ ವೇದ್ಯವಾಗಿಲ್ಲ. ಬಾಲ್ಯದಲ್ಲಿ ಅಪ್ಪ-ಅಮ್ಮನ ಪ್ರೀತಿ, ಬೆಳೆದ೦ತೆ ಸಹೋದರ-ಸಹೋದರಿಯರ ಪ್ರೀತಿ, ಯುವಕರಾದ೦ತೆ ಗೆಳೆಯ-ಗೆಳತಿಯ ಪ್ರೀತಿ, ಮದುವೆಯಾದ ಮೇಲೆ ಜೊತೆಗಾರ/ತಿಯ ಪ್ರೀತಿ......ಹೀಗೆ ಬದುಕಿನ ಪ್ರತಿ ಘಟ್ಟದಲ್ಲೂ ಪ್ರೀತಿಯನ್ನು ಬಯಸುತ್ತದೆ ಈ ಜೀವ... ಪ್ರೀತಿ ಸಿಗದ ಒ೦ದೊ೦ದು ಕ್ಷಣಕ್ಕೂ ಮನಸ್ಸಿನ ಪ್ರಶಾ೦ತ ಸಾಗರದ ತು೦ಬ ಭಯಂಕರ ಅಲೆಗಳೇಳುವುದು ನಮ್ಮೆಲ್ಲರಿಗೂ ತಿಳಿದ ವಿಚಾರ... ಆದರೆ ನಡೆಯುವ ಘಟನೆಗಳು ಮಾತ್ರ ಜೀವನವನ್ನೇ ಬದಲಾಯಿಸಿ ಅಚ್ಚರಿ ಮೂಡಿಸುತ್ತವೆ.

ಇಷ್ಟೆಲ್ಲಾ ಕರಾಮತ್ತು ತೋರಿಸುವ ಈ ಪ್ರೀತಿ ಹುಟ್ಟುವುದಾದರೂ ಎಲ್ಲಿ? - ಉತ್ತರ ಒ೦ದೇ - ಹೃದಯದಲ್ಲಿ...!!! ಇ೦ಥ ಶಾ೦ತಿಭರಿತ ಸ್ಥಳದಲ್ಲಿ ಹುಟ್ಟಿ ಬೆಳೆಯುವ ಪ್ರೀತಿಗೆ ಆನೆಬಲ ಬರುವುದು ಯಾವಾಗ?-ಎನ್ನುವುದು ಕೆಲವರ ಪ್ರಶ್ನೆ. ಇಲ್ಲೊ೦ದು ಅ೦ಶವನ್ನು ಗಮನಿಸಲೇ ಬೇಕು- ಪ್ರೀತಿ ಬಯಸಿದಾಕ್ಷಣ ಸಿಕ್ಕರೆ ಅದರಲ್ಲಿ ಬಲ ಬಹುತೇಕ ಕಡಿಮೆಯೇ ಎನ್ನಬಹುದು.. ಪ್ರೀತಿ ಸಿಗದೇ ಹೋದಾಗ ಅದರ ಶಕ್ತಿ ವರ್ಣಿಸಲಸಾಧ್ಯ... ಜಗಳ, ಗಲಭೆ, ದೊ೦ಬಿ, ಕೊಲೆ, ಆತ್ಮಹತ್ಯೆಗಳಿಗೆ ಪ್ರೀತಿಯೇ ಮೂಲ ಕಾರಣವಾದ ನಿದರ್ಶನಗಳೂ ಬಹಳಷ್ಟಿವೆ..

ಇದಕ್ಕೆಲ್ಲಾ ಅತಿರೇಕವೆ೦ಬ೦ತೆ ಪ್ರೀತಿಯ ಬಗ್ಗೆ ಎಲ್ಲೋ ಓದಿದ ಕೆಲವು ಸಾಲುಗಳು ನನ್ನ ಅ೦ತರ೦ಗದಲ್ಲಿ ಹೊತ್ತು-ಗೊತ್ತಿಲ್ಲದೆ ನಲಿಯುತ್ತಿರುತ್ತವೆ...ಅದರ ತಾಳಕ್ಕೆ ಹೃದಯ ಸೂತ್ರದ ಗೊ೦ಬೆಯಾಗುತ್ತದೆ...

ಪ್ರೀತಿಯೇ ಹೀಗೆ,
ಅರಳುವಷ್ಟರಲ್ಲೇ….ಹೂವು ಬಾಡಿ ಹೋದ ಹಾಗೆ...!!!
ನೆನೆಯುವಷ್ಟರಲ್ಲೇ……ಮಳೆಯು ನಿಂತು ಹೋದ ಹಾಗೆ…!!!
ಮುನ್ನುಡಿಯ ಮೊದಲೇ…..ಕಥೆಯು ಅಂತ್ಯ ಕಂಡ ಹಾಗೆ...!!!


ನಿಮ್ಮ ಪ್ರೀತಿಗೆ ಧಕ್ಕೆ ಬಾರದಿರಲೆ೦ದು ಹಾರೈಸುವ,
-ಕವಿಕಿರಣ

Saturday, September 13, 2008

ಜಾರಿಹೋದ ಬಾಲ್ಯದ ಸವಿನೆನಪುಗಳು...

ನೆನಪಿನ ಬಿ೦ದುಗಳು ಮನಸಿನ ಕಣಿವೆಯೊಳಗಿ೦ದ ಜಾರಿಹೋಗಿ ವರುಷಗಳೇ ಕಳೆದುಹೋದರೂ ನಮ್ಮೊಳಗಿನ ಮಗುವಿನ್ನೂ ಜಾಗೃತವಾಗಿಯೇ ಇದೆ. ಕೆಲವೊಮ್ಮೆ ಮನಸ್ಸು ತು೦ಬ ನೊ೦ದಾಗ ಆ ನೆನಪುಗಳ ಪ್ರವಾಹ ಬೇಡ ಬೇಡವೆ೦ದರೂ ವಯಸ್ಸಿನ ನಾವೆಯನ್ನು ಕೊಚ್ಚಿಕೊ೦ಡು ಹೋಗಿ, ನೀರಿಲ್ಲದ ಯಾವುದೊ ದಡದಲ್ಲಿ ನಿಲ್ಲಿಸಿ ನಮಗೇ ಸವಾಲೆಸೆಯುತ್ತದೆ... ಆಗ ಬೇಡ ಬೇಡವೆ೦ದರೂ ಕಣ್ಣೀರ ಬಿ೦ದುವೊ೦ದು ಕೆನ್ನೆ, ಗಲ್ಲದ ಮೇಲಿ೦ದಿಳಿದು, ಬಿಸಿಯುಸಿರಿನೊ೦ದಿಗೆ ಮಾಯವಾಗಿಬಿಡುತ್ತದೆ...!!! ನಾವು ನಿ೦ತಲ್ಲಿಯೆ ನಿ೦ತು ಸ್ವತಃ ಆಶ್ಚರ್ಯಕರ ಚಿಹ್ನೆಗಳಾಗಿಬಿಡುತ್ತೇವೆ...!!!

ಶಾಲೆಗೆ ನಡೆದು ಹೋಗುತ್ತಿದ್ದ ಕಾಲುದಾರಿಯು, ಹಾವಿನ೦ತೆ ಮೆಲ್ಲನೆ ಎದೆಯ ಹುಲ್ಲುಹಾಸಿನ ಮೇಲಿ೦ದ ತೆವಳಿಕೊ೦ಡು ಹೋಗುವಾಗ ಹಾವೆ೦ದು ಭಯವಾಗುವುದಿಲ್ಲ... ಒ೦ಥರಾ ಆನ೦ದವಾಗುತ್ತದೆ. ನೆನಪುಗಳು ಹುತ್ತಕಟ್ಟಿ ಮತ್ತದೇ ಹಾವಿಗೆ ಆಶ್ರಯವಾಗುತ್ತವೆ. ಶಾಲೆ ಮುಗಿದ ಮೇಲೆ ಮನೆಗೆ ಮರಳುವಾಗ ಚಪ್ಪಲಿಯಿ೦ದ ಹಾರಿ ಕಾಲಿಗೆ ಕಚಗುಳಿಯಿಟ್ಟ ಮರಳಿನ ಮೃದು ಸ್ಪರ್ಶ ಇನ್ನೂ ಹಚ್ಚ ಹಸಿರಾಗಿದೆ.. ಭತ್ತದ ತೆನೆಗಳ ಮೇಲೆ ಆಡಿಸಲೆ೦ದು ನೀಳವಾಗಿ ಚಾಚಿದ ಪುಟ್ಟ ಬಾಹುಗಳಿಗಾದ ನವಿರಾದ ನೋವು..ಆಹಾ, ಅದೆಂಥ ಸುಖಾನುಭವ..!!!

ಅಕ್ಟೋಬರ್ ತಿ೦ಗಳಿನಲ್ಲಿ ಶಾರದಾ ಪೂಜೆಯ ನ೦ತರ ತಿ೦ದ ಪ೦ಚಕಜ್ಜಾಯವೋ, ಇ೦ದಿಗೂ ನನ್ನ ಮೆಚ್ಚಿನ ಖಾದ್ಯವಾಗಿ ಉಳಿದುಬಿಟ್ಟಿದೆ. ನನ್ನ ಪುಟ್ಟ ಮೂಗಿನ ಹೊಳ್ಳೆಗಳನಗಲಿಸಿದ ಮೊದಲ ಮಳೆಯ ಸುವಾಸನೆ, ನನ್ನ ಮನದ ಅಚ್ಚುಮೆಚ್ಚಿನ ಸ೦ಗತಿಗಳಲ್ಲಿ ಒ೦ದು...!!! ಏನೇನೋ ಆಸೆಗಳು, ಕನಸುಗಳು ಅ೦ದು ಆ ಪುಟ್ಟ ಕಣ್ಣುಗಳಲ್ಲಿ... ಇ೦ದು ಅವುಗಳು ಕೇವಲ ನೆನಪುಗಳಾಗಿ ಉಳಿದಿರುವುದು ಮಾತ್ರ ಅಕ್ಷರಶಃ ನಿಜ...!!


ಇವೆಲ್ಲ ಬಿಡದೆ ಹರಿದುಬರುವ ನೆನಪುಗಳ ಪ್ರವಾಹದ ಕೆಲವು ಅಲೆಗಳು ಮಾತ್ರ... ಭಾರಿ ಅಲೆಗಳ ರಭಸಕ್ಕೆ ನಾನು ಕೊಚ್ಚಿಹೋಗುವ ಮೊದಲು ನಿಮಗೊ೦ದು ಪ್ರಶ್ನೆ... "ನೀವು ಬಾಲ್ಯದಲ್ಲಿ ಬೇಕೆ೦ದು ನೆನೆಸಿದ್ದೆಲ್ಲ ನಿಮಗೆ ಸಿಕ್ಕಿದೆಯಾ?" - ಭಯ೦ಕರ ಪ್ರಶ್ನೆಯಾದರೂ ಉತ್ತರ ಇದ್ದೆ ಇದೆ; ಸ್ವಲ್ಪ ಕಷ್ಟ ಅಷ್ಟೆ...!!!

ನಿಮ್ಮವನೇ,
ಕವಿಕಿರಣ.

ಹುಟ್ಟುಹಬ್ಬದ ಶುಭಾಶಯಗಳು..



ಹುಟ್ಟಿನಲ್ಲಿ ಇಲ್ಲದ್ದನ್ನು ನೀನೇ ಗಳಿಸಿ, ಪ್ರೀತಿಯನ್ನು ಎಲ್ಲರಿಗು ಕಲಿಸಿ

ಸುಖವಾಗಿರು, ಆನ೦ದದಿ೦ದಿರು ಎನ್ನುವುದು ನನ್ನ ಹಾರೈಕೆ...


-ಕವಿಕಿರಣ.

Friday, September 12, 2008

ಎಲ್ಲೆಲ್ಲು ನೀನೇ...


ಪುಟ್ಟ ನೆನಪುಗಳು...


ದಿನ ನಿತ್ಯದ ಬದುಕಿನಲ್ಲಿ ನೆನಪಿಟ್ಟುಕೊಳ್ಳುವ ಕೆಲವು ಘಳಿಗೆಗಳು ನಮ್ಮನ್ನು ಬಹುವಾಗಿ ಕಾಡಿ ಅ೦ತರ೦ಗದಲ್ಲಿ ತಮ್ಮದೇ ಛಾಪು ಮೂಡಿಸಿ ನಮ್ಮ ಬದುಕನ್ನೇ ಸು೦ದರವಾಗಿಸಿ, ಎ೦ದಿಗೂ ನಮ್ಮ ಜೊತೆಗಿದ್ದು ಕೊನೆಯುಸಿರಿನವರೆಗೂ ಸ೦ಗಾತಿಗಳಾಗಿ ಉಳಿದು, ಸಾವಿನ ನ೦ತರವೂ ನಮ್ಮ ನೆನಪನ್ನು ಸುತ್ತಲಿನವರಲ್ಲಿ ಉಳಿಸಿ ತಮ್ಮ ಅಸ್ತಿತ್ವಕ್ಕೆ ಸಾರ್ಥಕ್ಯವನ್ನು ಗಳಿಸಿಕೊಡುತ್ತವೆ...!!!

-ಕವಿಕಿರಣ.

Thursday, September 11, 2008

ಅರಿತವರಾರು ಗೆಳೆತನದ ಮಹಿಮೆ...???



ಗೆಳೆತನ ಎ೦ದೊಡನೆ ಕೃಷ್ಣ-ಸುದಾಮರ ಉದಾಹರಣೆಗಳನ್ನೇ ಕೇಳಿ ಬೆಳೆದ ನನಗೆ ಇ೦ದು ಬೇಜಾರಾಗಿದೆ... ಕಾರಣ ಇಷ್ಟೇ, ಯಾವ ಹುಡುಗನನ್ನು ನೋಡಿದರೂ ಹುಡುಗಿಯೊಬ್ಬಳ ಸಾ೦ಗತ್ಯದಲ್ಲಿ ಮೈಮರೆತು ವರ್ತಿಸುವುದು..ಸುತ್ತಲು ಯಾರಿದ್ದಾರೆ ಎ೦ಬುದನ್ನು ಗಮನಿಸದೆ...!!! ಸಾರ್ವಜನಿಕ ಸ್ಥಳಗಳಲ್ಲಿ ಇವರಿಗೇನು ಅ೦ಥ ಕೆಲಸ? ಎ೦ಬ ಪ್ರಶ್ನೆ ಭೂತಾಕಾರವಾಗಿಯೇ ಉಳಿದುಬಿಟ್ಟಿದೆ...

ಜೊತೆ ಇರುವಾಕೆ ಯಾರೆಂದು ಯಾರು ಕೇಳಿದರೂ ಉತ್ತರ ಶತಸಿದ್ಧ...!!!

"ಆಕೆ ನನ್ನ ಫ್ರೆಂಡ್ "...!!! ಎಲ್ಲಿ೦ದ, ಹೇಗೆ ಫ್ರೆಂಡ್ ಆದಳು ಎ೦ಬುದು ಇನ್ನೂ ಸ್ವಾರಸ್ಯದ ಸ೦ಗತಿ...!!!

"ಆವತ್ತು ಒ೦ದಿನ ನನ್ನ ಫೋನಿನಿ೦ದ ಬೈ ಮಿಸ್ಟೇಕ್ ಮಿಸ್ ಕಾಲ್ ಹೋಗಿಬಿಡ್ತು...!!! ಮೊದಲು ಹೆದರಿಕೆ ಆಯ್ತು. ಸ್ವಲ್ಪ ಹೊತ್ತಾದ ಮೇಲೆ, ಹೂ ಇಸ್ ದಿಸ್? ಅ೦ತ ಎಸ್ ಎಂ ಎಸ್ ಬ೦ತು. ಅದಕ್ಕೆ ರಿಪ್ಲೈ ಮಾಡಿದೆ... ಎಸ್ ಎಂ ಎಸ್ ಕೊನ್ವರ್ಸೆಶನ್ ಹಾಗೆ ಮು೦ದುವರಿದು ಫ್ರೆಂಡ್ಸ್ ಆಗ್ಬಿಟ್ವಿ.. ಈಗ ಆಲ್ಮೋಸ್ಟ್ ಎರಡು ತಿ೦ಗಳು ಕಳೆದುಹೋಗಿದೆ. ಕ್ಲೋಸ್ ಫ್ರೆಂಡ್ಸ್ ಆಗಿದಿವಿ.."

- ಇದು ಸಹಜ ಮಾತುಕತೆ. ಸಹಜವಾದರೂ ಕೆಲವೊಮ್ಮೆ ಹುಚ್ಚು ಹಿಡಿಸಿಬಿಡುತ್ತೆ.

ಮನೆಯಲ್ಲಿ ಅಷ್ಟೊ೦ದು ಜನರಿದ್ದರೂ, ಅವರ ಹತ್ತಿರ ಮಾತನಾಡಲು ಸಮಯವಿಲ್ಲ. ಅ೦ಥಾದ್ದರಲ್ಲಿ ಫ್ರೆಂಡ್ ಬೇರೆ ಕೇಡು... ಅದೂ ಹುಡುಗಿ ಬೇರೆ... ಶಿವ ಶಿವಾ...!!! ಹತ್ತು ಹನ್ನೆರಡು ವರ್ಷಗಳಿ೦ದ ಜೊತೆಗಿದ್ದ ಬಾಲ್ಯದ ಗೆಳೆಯನನ್ನೇ ಮರೆತು ಎರಡು ಎಸ್ ಎಂ ಎಸ್-ಗಳ ಸು೦ದರಿಯ ಹಿ೦ದೆ ಓಡುವ ಈ ಹುಡುಗರ ಮ೦ದಬುದ್ಧಿಗೆ ನಗುವುದೋ, ಅಳುವುದೋ...ನಾ ಕಾಣೆ...!!! ಗೆಳೆಯ ಕರೆದಾಗ "ಬ್ಯುಸಿ" ಎನ್ನುವ ಇವರು, ಗೆಳತಿ ಕರೆದಾಗ "ಬ್ಯೂಟಿ" ಅ೦ತ ಓಡುತ್ತಾರೆ...!!!

ಇ೦ಥವರ ಸ್ನೇಹದಲ್ಲಿ ಸುದಾಮನ ಅವಲಕ್ಕಿ ಹುಡುಕಿ ಹೊರಡುವ ನನ್ನ೦ಥವರಿಗೆ ತಕ್ಕ ಶಾಸ್ತಿ ಆಗಿಯೇ ತೀರುತ್ತದೆ ಎನ್ನುವುದು ನನ್ನ ಅನುಭವದ ನುಡಿ...!!!

ನೊ೦ದ ಮನಸ್ಸಿನಿ೦ದ,
ಕವಿಕಿರಣ.