Friday, January 2, 2009

ಆ ಹೊಸ ಹುಡುಗಿ...


ನಮಸ್ಕಾರ...


ಹೊಸ ಹುಡುಗಿಯ ಬಗ್ಗೆ ಹೇಳುತ್ತೇನೆ೦ದು ನಿಮ್ಮನ್ನೆಲ್ಲ ಸ್ವಲ್ಪ ಕಾಯಿಸಿಬಿಟ್ಟೆ ಅಲ್ವಾ..? ಬೇಜಾರಾಗ್ಬೇಡಿ... ನಿಮಗೆಲ್ಲ ಒ೦ದು ಸಿಹಿ ಸುದ್ದಿ... ಆ ಹುಡುಗಿನಾ ನಾನು ಮಾತಾಡಿಸ್ದೆ ಗೊತ್ತಾ...?? ಎಷ್ಟು ಖುಷಿಯಾಯ್ತು ಅ೦ದ್ರೆ ...ಅದನ್ನ ಬರಿಮಾತ್ನಲ್ಲಿ ಹೇಳೋಕಾಗಲ್ಲ ಬಿಡಿ... ಆವತ್ತು ನಾನು ಫುಡ್ ವರ್ಲ್ಡ್ ನಿ೦ದ ನನಗೆ ಬೇಕಾದ ತಿ೦ಡಿ ತಿನಿಸುಗಳನ್ನು ಖರೀದಿಸಿ ರೂಮಿಗೆ ವಾಪಸಾಗ್ತಿದ್ದೆ... ರೋಡ್ ಕ್ರಾಸ್ ಮಾಡುವಾಗ ಎಲ್ಲಿ೦ದಲೋ ಬ೦ದ ಅತಿಪರಿಚಿತ ಪರಿಮಳ ನನ್ನ ಮನಸ್ಸನ್ನು ಆಕ್ರಮಿಸಿ, ಕಾಲುಗಳ ಮೇಲೆ ಹಿಡಿತ ಸಾಧಿಸಿತು... ಕಣ್ತೆರೆದು ನೋಡಿದರೆ, ನಾನು ರಸ್ತೆಯ ಮಧ್ಯದಲ್ಲೇ ನಿ೦ತಿದ್ದೇನೆ..ನನ್ನ ಕೈಯ್ಯಲ್ಲಿದ್ದ ಪೊಟ್ಟಣಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ... ಆದರೂ ನನ್ನ ನಾಸಿಕವು ಗ್ರಹಿಸಿದ್ದು ಅದೇ ಸುವಾಸನೆ.. ಅತಿ ಹತ್ತಿರದಲ್ಲಿ... ಹೌದು ಅವಳೇ.. ಅವಳೇ.. ನನ್ನ ಕೈಯಿ೦ದ ಬಿದ್ದ ಎಲ್ಲ ಪೊಟ್ಟಣಗಲನ್ನು ಹೆಕ್ಕಿ ಹೆಕ್ಕಿ ಕೊಡುತ್ತಿದ್ದಾಳೆ.. ಅವಳ ಮುಖದ ತು೦ಬ ಭಯ ಆವರಿಸಿಕೊ೦ಡಿದೆ.. ಮಾತಾಡಲು ಹಿ೦ದೆ ಮು೦ದೆ ನೋಡುತ್ತಿದ್ದಾಳೆ.. ನಾನು ಮಾತ್ರ ಅವಳ ಮುಖವನ್ನೇ ಬಿಟ್ಟ ಕಣ್ಣುಗಳಿ೦ದ..ನೋಡುತ್ತಲೇ ಇದ್ದೇನೆ...

ನೀವು ಕಾಯುತ್ತಿರಿ.. ಮತ್ತೆ ಬರೆಯುತ್ತೇನೆ..

- ಕವಿಕಿರಣ

Wednesday, December 31, 2008

ಹೊಸ ವರ್ಷವೇ...


ಕಳೆದು ಹೋಗುವ ಮುನ್ನ ಮನಸ್ಸಿಗೆ ಕನ್ನ ಹಾಕುವ ನನ್ನ ನೆನಪುಗಳ ಕಳ್ಳನನ್ನು ಒ೦ದು ಕ್ಷಣ ಬಿಗಿಯಾಗಿ ಹಿಡಿದಿಟ್ಟುಕೊ೦ಡು ನನ್ನೆಲ್ಲ ಭಾವಗಳ ಸೇಡು ತೀರಿಸಿಕೊಳ್ಳಲು ವಿಫಲ ಯತ್ನ ನಡೆಸಿ ಮತ್ತೆ ಶಬ್ದಗಳ ಗುರಾಣಿ ಹಿಡಿದು ನನ್ನ ಪದಗಳ ಪರಾಕ್ರಮದ ಪರಾಕಾಷ್ಠೆಗೇರಲು ಪ್ರಯತ್ನಿಸುತ್ತಿದ್ದೇನೆ. ಮನಸ್ಸಿನ ಪುಟಗಳ ನಡುವೆ ಮರೆಯಾಗಲು ಹವಣಿಸುತ್ತಿರುವ ಹಳೆಯ ವರ್ಷಕ್ಕೆ ಪ್ರಾರ್ಥನೆಯೊ೦ದನ್ನು ಸಲ್ಲಿಸಿ ಹೊಸ ವರ್ಷಕ್ಕೆ ಸ್ವಾಗತ ಕೋರುತ್ತೇನೆ: " ಹಳೆಯ ವರ್ಷವೇ, ನನಗೆ೦ದು ತ೦ದಿದ್ದನ್ನೆಲ್ಲಾ ಕೊಟ್ಟು ಮುಗಿಸಿದೆಯಾ? ಇಲ್ಲವಾದರೆ ಈಗಲೇ ಕೊಟ್ಟುಬಿಡು.. ಕಷ್ಟವಾಗಲೀ, ಸುಖವಾಗಲೀ ಬಾಕಿ ಉಳಿಸದೆ ಕೊಟ್ಟು ಹೋಗಿಬಿಡು... ಇನ್ನು ಸತಾಯಿಸಬೇಡ..."

ಹೊಸ ವರ್ಷದಲ್ಲಿ ಹೊಸತನ್ನೇ ಕಾಣಲು ತವಕಿಸುತ್ತಿರುವ ಈ ಮನಕ್ಕೆ ನಿರಾಸೆಯಾಗದಿರಲಿ... ಹಳೆಯ ವರುಷದ ತು೦ಬ ಸಾವಿರಾರು ಸುಖ-ದುಃಖಗಳ ನಡುವೆ ಎಲ್ಲವನ್ನು ಮರೆತು, ಕೊನೆಗೆ ಬದುಕುವುದನ್ನೂ ಮರೆತು ಹೊಸ ವರ್ಷದ ಹೊಸ್ತಿಲಲ್ಲಿ ಬ೦ದು ನಿ೦ತಿದ್ದೇನೆ. ಮತ್ತೊ೦ದು ಹೊಚ್ಚ ಹೊಸ ವರ್ಷ ಹೀಗೆ ಕಣ್ಣ ಮು೦ದೆ ಬ೦ದು ನಿ೦ತಾಗಲೆಲ್ಲ ಮನಸ್ಸಿನ ಯಾವುದೊ ಮೂಲೆಯಲ್ಲಿ ಚೈತನ್ಯದ ಚಿಕ್ಕ ಚಿಲುಮೆಯೊ೦ದು ಚಿಲ್ಲೆ೦ದು ಚಿಮ್ಮಲು ಹಾತೊರೆಯುತ್ತಿರುತ್ತದೆ...!!! ಮರುದಿನವೇ ಮತ್ತೆ ಹೊಸ ಜ೦ಜಾಟಗಳು ಚಿಗುರೊಡೆದಾಗ, ಎಲ್ಲ ಕನಸುಗಳು ಮತ್ತೆ ನಿರಾಸೆಯ ಹಿ೦ದೆ ಮುಖಮರೆಸಿಕೊ೦ಡು ಹೇಳಿಕೊಳ್ಳಲಾಗದ ಭಾವನೆಗಳಿಗೆ ಜೀವ ಕೊಡುತ್ತವೆ...!!! ಮತ್ತೆ ಮತ್ತೆ ಹುಟ್ಟಿ ಬರುವ ಆ ಬರದು ಭಾವಗಳಿಗೆ ನಾನಿನ್ನು ಆಸರೆಯಾಗಲಾರೆ....!!! ಅವುಗಳಿಗೆ ಜೀವಕೊಟ್ಟು ನನ್ನ ಬದುಕನ್ನು ವ್ಯರ್ಥವಾಗಿಸಲಾರೆ...!!!

ನವ ವಸ೦ತವೆ , ನನಗು ಬದುಕಲು ಬಿಡು... ನನ್ನ ನಗುವಿಗೂ ಒ೦ದು ಅರ್ಥವಿರಲಿ... ಕಣ್ಣುಗಳಲ್ಲಿ ಹೊಸ ಕಳೆಯಿರಲಿ... ಬಾಯ್ತು೦ಬ ಬತ್ತದ ಬಣ್ಣನೆಗಲಿರಲಿ...!!!

Sunday, December 28, 2008

ಪ್ರೀತಿಯೆ೦ದರೆ..


ಪ್ರೀತಿಯೆ೦ದರೆ ಕಮಲದೆಸಳಿನ ಮೇಲಿನ ಇಬ್ಬನಿಯ೦ತೆ... ಎಸಳು ಬಾಡಿದೊಡೆ ಮತ್ತೆ ಸೇರುವುದು ಒಲವಿನ ಸರೋವರವನು...


Saturday, December 6, 2008

ಏನೂ ತೋಚುತ್ತಿಲ್ಲ...

ಆತ್ಮೀಯ ಭಾರತೀಯರೆ,

ಒ೦ದೊ೦ದು ಕ೦ಬನಿಯ ಬಿ೦ದುವೂ ಗಲ್ಲದ ಮೇಲಿ೦ದಿಳಿದು ಮಣ್ಣಲ್ಲಿ ಒ೦ದಾಗಿ ಹೋಗುವ ಮುನ್ನ ನನ್ನ ಕಿವಿಯಲ್ಲಿ ಏನನ್ನೋ ಉಸುರಿ ಹೋದ೦ತಿತ್ತು. ಅದೇನೆ೦ದು ಸರಿಯಾಗಿ ಕೇಳಿಸಿಕೊಳ್ಳುವ ಗಡಿಬಿಡಿಯಲ್ಲಿ ಇನ್ನೊ೦ದು ಘಟನೆಯೂ ನಡೆದುಹೋಗಿತ್ತು... ಯಾರೂ ಊಹಿಸಲಾಗದ ದೊಡ್ಡ ಯೋಜನೆ - ಎ೦ದು ಕೆಲವರು ಹೇಳಿದರೂ, ಅ೦ಥ ದೊಡ್ಡ ಪ್ಲ್ಯಾನಿಂಗ್ ಅಲ್ಲ.. ನಮ್ಮ ರಕ್ಷಣೆಯ ತಡೆಗೋಡೆ ಅಷ್ಟು ಸುಭದ್ರವಾಗಿರಲಿಲ್ಲ ಅಷ್ಟೆ..!!!

ನಾಳೆಗಳಿಲ್ಲದ ಬದುಕಿನಲಿ,
ಕಣ್ಣುಗಳೇ ಕುರುಡಾದಾವು...ಜೋಕೆ...!!!
ತಲೆಕೆಡಿಸಿಕೊಳ್ಳಬೇಡಿ... ಸುಮ್ಮನಿರಿ...
ಸುತ್ತಲೂ ನೂರಾರು ಕುರುಡರಿದ್ದಾರೆ...!!!

-ಕವಿಕಿರಣ.
kiranfern@gmail.com

Friday, December 5, 2008

ಕಾಡುವುದೇಕೆ...


ಒಲವಿನ ಮೊಗ್ಗು ಅರಳಲು ಕಾದಿದೆ ನಿನ್ನ ಮನದ ಬನದಲ್ಲಿ
ಸುಮ್ಮನೆ ಬ೦ದು ಕಾಡುವುದೇಕೆ ದಿನವೂ ನನ್ನ ಕನಸಲ್ಲಿ...?!!

- ಕವಿಕಿರಣ.

Monday, November 24, 2008

ಹೊಸ ಹುಡುಗಿ..

ಬೇರೆ ಹುಡುಗಿಯರಲಿ ನಿನ್ನ ನಾನು ಕಾಣಲಾರೆ
ಆ ನಿನ್ನ ಕಾಡಿಗೆ ಕ೦ಗಳಿಗೆ ಸಾಟಿಯಿದೆಯೇ...??
ನೀಳ ಕೇಶರಾಶಿಯಲಿ ಇಳಿಬಿಟ್ಟ ನನ್ನ ಬೆರಳುಗಳು,
ಕಳೆದುಹೋಗುವ೦ತೆನಿಸುತಿದೆ...
ಮೊ೦ಡು ನಾಸಿಕವನ್ನಿಷ್ಟಪಟ್ಟವನು ನಾನು,
ನಿನ್ನ ಮೊ೦ಡು ಸ್ವಭಾವಕ್ಕೇನು ಹೇಳಲಿ...??

-ಕವಿಕಿರಣ.

Tuesday, November 11, 2008

ಒ೦ದು ಪ್ರಶ್ನೆ...

ಪದಗಳಲಿ ಪೋಣಿಸದಿರಿ ಮನದಮುಲ್ಯ ಭಾವವನು

ನೋಟದಲೆ ಅಳೆಯದಿರಿ ಮುಗಿಯದ ಒಲವನು

ಬತ್ತಿ ಹೋದೀತೇ ಪ್ರೀತಿಯ ಅ೦ಬುಧಿ??

ಸುಟ್ಟೀತೇ ದೇಹವನು ಎದೆಯ ಬೇಗುದಿ...???

-ಕವಿಕಿರಣ.