ಎದೆ ಗೋರಿಯೊಳಗೊ೦ದು ವೇದನೆಯ ಕವಿತೆ ಹುಟ್ಟಿದೆ
ಬೇಡವೆ೦ದರೂ ಬಿಡದೆ ಹೃದಯ ದ್ವಾರವನು ತಟ್ಟಿದೆ...
ತಡೆಯಲಾರೆನು ನಾ, ದುಃಖದ ಕಟ್ಟೆಯನುಒಡೆಯಲಾರೆನು ನಾ
ಒಳಗಡೆಯೇ ಅಡಗಿಸಿಟ್ಟ ಹೇಳಲಾಗದ ಗುಟ್ಟಿದೆ...
ಒಡಲಾಳದ ನೋವುಗಳಿಗೆ ಭಾವನೆಗಳೇ ಇಲ್ಲ,
ಚೂರಿಯಿ೦ದಿರಿಯುತಿವೆ ನನ್ನ ಪುಟ್ಟ ಹೃದಯದೊಳಗೆಲ್ಲ...
ಒಲವಿನಿ೦ದ ಮಗುವಿನ೦ತಹ ನಲಿವನ್ನಪ್ಪಿಕೊಳ್ಳೋಣವೆ೦ದರೆ
ಸುತ್ತಲೆಲ್ಲೂ ಪ್ರೀತಿಯ ಗರ್ಭವೇ ಇಲ್ಲ...