Friday, August 29, 2008

ತುಡಿತ

ಕರೆದಾಗೆಲ್ಲ ಬಂದೆ ನೀನು,
ದೂರವೆನ್ನಿಸಲೇ ಇಲ್ಲ...
ಸಾಮೀಪ್ಯದ ಉತ್ತುಂಗ
ಗೊತ್ತಾಗಲೇ ಇಲ್ಲ...
ಇಂದಿಲ್ಲಿ ನೀನಿಲ್ಲ,
ಕರೆ ಕೇಳಿಸದಷ್ಟು ಅಂತರ,
ದೂರದರಿವಾಗಿದೆ...
ನಾನು ನಾನಾಗಿಲ್ಲ...!!!

-ಕವಿಕಿರಣ

ಸರಳ ಬದುಕು ಸುಂದರ...

ನನ್ನ ಮೌನ ಮಾತನಾಡುವಾಗ ನೀನು ಕಿವಿಗೊಡೆ

ತಿಳಿದೀತು ನಿನಗೆ ನನ್ನ ಮನದ ಹಂಬಲ...

ಸುಮ್ಮನೆ ಬಾಳನ್ನು ಸಂಶಯಗಳ ಭಂದಾರವಾಗಿಸದಿರು

ಸರಳ ಬದುಕು ತುಂಬ ಸುಂದರ...!!!

ಕಾಯುವಿಕೆ...

ನನ್ನೆದೆಯ ಕತ್ತಲ ಕೋಣೆಯಲ್ಲಿ
ಉಳಿದುಹೋದ ನಿನ್ನ ನೆನಪುಗಳಿಗೆ
ಕಾಲ-ಜೇಡ ಬಲೆ ಕಟ್ಟಿದೆ...

ಎಂದೋ ಬರುವೆನೆಂದು ಹೋದ ನೀನು
ಮರಳಿ ಬರುವೆಯೆಂದು ಕಾದುಕುಳಿತ ಬಾಗಿಲಿಗೆ
ಗೆದ್ದಲು ಹುತ್ತ ಕಟ್ಟಿದೆ...

-ಕವಿಕಿರಣ

Thursday, August 28, 2008

ಕಂಗಳ ಸಾಗರ...

ನಿನ್ನ ಕ೦ಗಳ ಸಾಗರದಲಿ

ಬರಿ ಸಮಸ್ಯೆಗಳ ಈಜು...

ನನ್ನ ಮುಖದ ಬಣ್ಣ ಬದಲಾಗಲು

ನಿನಗೋ ಮುಗುಳ್ನಗೆಯ ಮೋಜು...